
25th April 2025
ಮಲ್ಲಮ್ಮ ನುಡಿ ವಾರ್ತೆ
ಕೊಪ್ಪಳ : ಜಿಲ್ಲೆಯ ಗಂಗಾವತಿಯ ವಿದ್ಯಾನಗರದ ಜಮೀನಿನ ಸರ್ವೆ ನಂಬರ್ 121ರ ನನ್ನ ತಂದೆ ಪಂಪಣ್ಣ ಇವರ ಸಮಾಧಿಯನ್ನು ಕಲ್ಗುಡಿ ಸುಬ್ಬರಾವ್ ಮತ್ತು ಆತನ ಸಹಚರರು ಕೆಡವಿ ಧ್ವಂಸ ಮಾಡಿದ್ದು ಇವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿ ಪೂರ್ವಜರ ಇನಾಂ ಜಮೀನು ಯಥಾಸ್ಥಿತಿಯಾಗಿ ಇರುವಂತೆ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿರುವುದಾಗಿ ಗಂಗಾವತಿಯ ಹಿರೇ ಜಂತಕಲ್ ನ ಮಂಗಳಮ್ಮ ಬಾಲಪ್ಪ ಹೇಳಿದರು.
ಅವರು ಗುರುವಾರದಂದು ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ವೇಶಿಸಿ ಮಾತನಾಡಿ ಸಂಬಂಧಿಸಿದ ದಾಖಲೆಗಳನ್ನು ಬಿಡುಗಡೆ ಮಾಡಿ 1972 ರಲ್ಲಿ ನಾಲ್ಕು ಜನ ಸಹೋದರರಿಗೆ ರೀ ಗ್ರಾಂಡ್ ಆಗಿ ಬಾಲಪ್ಪ, ಪಾರ್ವತಮ್ಮ, ಪಂಪಣ್ಣ ಮಾರೇಪ್ಪ ಮಂಜೂರಾಗುತ್ತದೆ ಅದರಲ್ಲಿ ನನಗೆ ಅಂದರೆ ಪಂಪಣ್ಣನ ಮಗಳಾದ ನಾನು ಮಂಗಳಮ್ಮ ಗಂಡ ಬಾಲಪ್ಪ 7 ಎಕರೆ 20 ಗುಂಟೆ ಜಮೀನಿನಲ್ಲಿ ಚಿಕ್ಕ ಪುಟ್ಟ ವ್ಯವಸಾಯ ಮಾಡಿಕೊಂಡು ಬಂದಿದ್ದು ಆದರೆ ಈಗ 2 ಎಕರೆ 20 ಗುಂಟೆಯಲ್ಲಿ ಯಾವುದೇ ಸಂಬಂಧ ಇಲ್ಲದವರು ಖರೀದಿಸಿರುವುದಾಗಿ ಕಬ್ಜಾ ಮಾಡಿದ್ದು ಈ ಅನ್ಯಾಯದ ವಿರುದ್ಧ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಲು ಹೋದರೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ, ದೂರು ಸಹ ಅವರು ಪಡೆಯುತ್ತಿಲ್ಲ ಅವರು ಕಬ್ಜಾ ಮಾಡಿದವರ ಪರ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು ಈ ಆರು ತಿಂಗಳ ಹಿಂದೆ ನಮ್ಮ ಜಮೀನಿನಲ್ಲಿ ಜೋಳ ಬೆಳೆಯಲಾಗಿತ್ತು ಆಗ ನಮ್ಮ ಜಮೀನು ಎಂದು 100 ರಿಂದ 150 ಜನ ಬಂದು ಜಮೀನಿನಲ್ಲಿ ಬೆಳೆದ ಜೋಳವನ್ನು ಜೆಸಿಬಿ
ಯಿಂದ ಕೆಡಿಸಿ ಹಲ್ಲೆ ಮಾಡಿದ್ದರು, ಆಗ ಪೊಲೀಸ್ ಠಾಣೆಗೆ ದೂರು ಕೊಡಲು ಹೋದರು ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಈ ಕುರಿತು ಮಾನವ ಹಕ್ಕುಗಳ ಆಯೋಗಕ್ಕೂ ಸಹ ದೂರು ನೀಡಲಾಗಿತ್ತು ಆದರೂ ಯಾವುದೇ ನ್ಯಾಯ ಸಿಗಲಿಲ್ಲ ಕಬ್ಜಾ ಮಾಡಿದವರು ನಿಮ್ಮ ಹೆಸರಿನಲ್ಲಿ ಯಾವುದೇ ಕಾಗದ ಪತ್ರ ಇಲ್ಲ ಎಂದು ನಮ್ಮ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ ಹೀಗಾಗಿ ಜೀವ ಬೆದರಿಕೆ ಕೊಲೆ ಬೆದರಿಕೆ ಹಾಕುತ್ತಿದ್ದು ಈ ಜಮೀನಿನ ದಾಖಲೆಗಳಂತೆ ನಮಗೆ ಮರಳಿ ನೀಡಿ ನಮಗೆ ಕೃಷಿ ವ್ಯವಸ್ಥೆ ಮಾಡಲು ಅನುಕೂಲ ಮಾಡಿಕೊಳ್ಳಬೇಕು, ನಮ್ಮ ಮೇಲೆ ಹಲ್ಲೆ ಮಾಡಲು ಬಂದವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಪಲ್ಲವಿ ನಾಯಕ್, ಪರಶುರಾಮ್ ನಾಯಕ್, ಅಮರಪ್ಪ ನಾಯಕ್, ರೇಣುಕಾ ಕಂಪ್ಲಿ ಉಪಸ್ಥಿತರಿದ್ದರು.
ಕನ್ನಡ ಭಾಷಾಭಿಮಾನವನ್ನು ಬೆಳೆಸಿದವರು ಡಾ. ರಾಜ್ಕುಮಾರ್ - ಚಲನಚಿತ್ರ ಅಕಾಡೆಮಿ ಸದಸ್ಯೆ ಸಾವಿತ್ರಿ ಮುಜುಮದಾರ